/newsfirstlive-kannada/media/post_attachments/wp-content/uploads/2024/06/chethan1.jpg)
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ನಟ ದರ್ಶನ್ ಸೇರಿ ಒಟ್ಟು 13 ಆರೋಪಿಗಳನ್ನು 24 ಎಸಿಎಂಎಂ ಇನ್ಚಾರ್ಜ್ ಕೋರ್ಟ್ ಎಕಾನಾಮಿಕ್ ಆಫೇನ್ಸ್ ಕೋರ್ಟ್ಗೆ ಹಾಜರು ಪಡಿಸಲಾಗಿದೆ. ನ್ಯಾಯಾಧೀಶರಾದ ವಿಶ್ವನಾಥ್ ಸಿ ಗೌಡರ್ ಅವರು ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ. ಮತ್ತೆ 2 ದಿನ A2 – ದರ್ಶನ್, A9 – ಧನರಾಜ್, A10 – ವಿನಯ್, A14 – ಪ್ರದೂಶ್ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಇದನ್ನೂ ಓದಿ: 1000 ಗಡಿ ತಲುಪಿದ ಸಾವು.. ಹಜ್ ಯಾತ್ರೆ ಇತಿಹಾಸದಲ್ಲೇ 3ನೇ ಅತಿ ದೊಡ್ಡ ದುರಂತ; ಆಘಾತಕಾರಿ ವರದಿ!
ಈ ಮಧ್ಯೆ ನಟ ಚೇತನ್ ಅಹಿಂಸಾ ಅವರು ದರ್ಶನ್ ಪ್ರಕರಣದಲ್ಲಿ ಮಂಡ್ಯ ಮಾಜಿ ಸಂಸದೆ ಸುಮಲತಾ ಅಂಬರೀಶ್ ಮೌನವನ್ನು ಪ್ರಶ್ನಿಸಿದ್ದಾರೆ. ಹಿರಿಯ ಮಗನ ಬಗ್ಗೆ ಸುಮಲತಾ ಯಾಕೆ ಮಾತಾಡ್ತಿಲ್ಲ? ರಾಜಕೀಯ ಉದ್ದೇಶದಿಂದ ದರ್ಶನ್ ಸ್ಟಾರ್ ಪವರ್ ಬಳಸಿಕೊಂಡು ಈಗ ಸುಮ್ಮನಿರೋದೇಕೆ ಅಂತ ಟ್ವೀಟ್ ಮಾಡುವ ಮೂಲಕ ಪ್ರಶ್ನೆ ಮಾಡಿದ್ದಾರೆ.
ಸಾಮಾಜಿಕ ಜಾಲತಾಣವಾದ X ಖಾತೆಯಲ್ಲಿ ನಟ ಚೇತನ್ ಅಹಿಂಸಾ ಅವರು, ಬಹುತೇಕ ಕೆ. ಎಫ್. ಐ. ವ್ಯಕ್ತಿಗಳು ದರ್ಶನ್ ಪ್ರಕರಣ ಒಂದು ವಾರಕ್ಕೂ ಮೀರಿದ್ದರೂ ಅದರ ಬಗ್ಗೆ ಮೌನವಾಗಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ತನ್ನ ರಾಜಕೀಯ ಲಾಭಕ್ಕಾಗಿ ದರ್ಶನ್ ಅವರ ಸ್ಟಾರ್ ಪವರ್ ಅನ್ನು ಬಳಸಿದ ಸುಮಲತಾ ಅಂಬರಿಶ್ ಅವರನ್ನು ತಮ್ಮ 'ಹಿರಿಯ ಮಗ' ಎಂದು ಕರೆದಿದ್ದರು. ತನ್ನ ಮಗನ ಇತ್ತೀಚಿನ ಘಟನೆಗಳ ಬಗ್ಗೆ ಸುಮಲತಾ ಏನು ಹೇಳುತ್ತಾರೆ? ತಲೆ ಮರೆಸಿಕೊಳ್ಳುವುದು ಒಂದು ಆಯ್ಕೆಯಾಗಿರಬಾರದು ಅಂತ ಬರೆದುಕೊಂಡಿದ್ದಾರೆ.
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa)
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) June 20, 2024
">June 20, 2024
ಈ ಮೊದಲು 5 ದಿನ ದರ್ಶನ್ ಅಂಡ್ ಗ್ಯಾಂಗ್ ಅನ್ನು ಪೊಲೀಸರು ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು. ಇಂದು 13 ಆರೋಪಿಗಳನ್ನು ಪೊಲೀಸರು ಜಡ್ಜ್ ಮುಂದೆ ಹಾಜರು ಪಡಿಸಿದ್ದರು. ಅದರಲ್ಲಿ ಈ ಕೊಲೆ ಕೇಸ್ನಲ್ಲಿ ಪ್ರಮುಖ ಆರೋಪಿಯಾಗಿರೋ ಪವಿತ್ರ ಗೌಡ, ಪಿಎ ಪವನ್, ರಾಘವೇಂದ್ರ, ನಂದೀಶ್, ಜಗದೀಶ @ ಜಗ್ಗ, ಅನು@ ಅನು ಕುಮಾರ್, ನಾಗರಾಜ್, ಲಕ್ಷ್ಮಣ್, ದೀಪಕ್, ಕೇಶವಮೂರ್ತಿ, ರವಿ, ಕಾರ್ತಿಕ್ ಜೈಲು ಸೇರಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ